ಟ -
ಕನ್ನಡ ವರ್ಣಮಾಲೆಯಲ್ಲಿ ಟವರ್ಗದಲ್ಲಿನ ಪ್ರಥಮಾಕ್ಷರ. ಅಲ್ಪಪ್ರಾಣ. ಅಶೋಕನ ಕಾಲದಲ್ಲಿ ಅರ್ಧವೃತ್ತಾಕಾರವಾಗಿದ್ದ ಈ ಅಕ್ಷರಕ್ಕೆ ಹೊಕ್ಕಳು ಮೂಡಿದ್ದು ಗಂಗರ ಕಾಲದಲ್ಲಾದರೂ ಅದು ಖಚಿತವಾದದ್ದು ರಾಷ್ಟ್ರಕೂಟ ಹಾಗೂ ಕಲ್ಯಾಣ ಚಾಳುಕ್ಯರ ಕಾಲಗಳಲ್ಲಿ. ಈ ಅಕ್ಷರಕ್ಕೆ ಈಗಿನ ರೂಪ ಸಿದ್ದಿಸತೊಡಗಿದ್ದನ್ನು ಚಿತ್ರದಲ್ಲಿ ಕಾಣಿಸಿದೆ. ಮೈಸೂರರಸರ ಕಾಲದಲ್ಲಿ ಇದಕ್ಕೆ ಈಗಿನ ರೂಪ ಖಚಿತವಾಯಿತು. ಈ ಅಕ್ಷರ ಅಘೋಷ ಸ್ಪರ್ಶಮೂರ್ಧನ್ಯ ಧ್ವನಿಯನ್ನು ಸೂಚಿಸುತ್ತದೆ. 				(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ